Site icon nadubadenews.com

ಮುಕ್ತ ವಿಶ್ವವಿದ್ಯಾನಿಲಯ ಪ್ರವೇಶಕ್ಕೆ ಮಾರ್ಚ್ 31 ಅಂತಿಮ

ಮುಕ್ತ ವಿಶ್ವವಿದ್ಯಾನಿಲಯ ಪ್ರವೇಶಕ್ಕೆ ಮಾರ್ಚ್ 31 ಅಂತಿಮ
ಮುಕ್ತ ವಿಶ್ವವಿದ್ಯಾನಿಲಯ ಪ್ರವೇಶಕ್ಕೆ ಮಾರ್ಚ್ 31 ಅಂತಿಮ

ಮಡಿಕೇರಿ ಮಾ.20 :- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ 2024-25 ನೇ ಜನವರಿ ಆವೃತ್ತಿ ಪ್ರವೇಶಾತಿಗೆ 2025 ರ ಮಾರ್ಚ್, 31 ಕೊನೆಯ ದಿನವಾಗಿದೆ ಎಂದು ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ಅವರು ತಿಳಿಸಿದ್ದಾರೆ.

ಉದ್ಯೋಗದಲ್ಲಿರುವ ಆಸಕ್ತರು, ಕ.ರಾ.ಮು.ವಿಯಲ್ಲಿ ಪ್ರವೇಶಾತಿ ಪಡೆಯಲು ಅನುಕೂಲ ಮಾಡಿಕೊಡುವ ಸಲುವಾಗಿ 2025ರ ಮಾರ್ಚ್, 31 ರವರೆಗೆ ಸಾರ್ವತ್ರಿಕ ರಜಾ ದಿನಗಳಾದ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕ.ರಾ.ಮು.ವಿ. ಮಡಿಕೇರಿ ಪ್ರಾದೇಶಿಕ ಕೇಂದ್ರ ಕಚೇರಿ ತೆರೆಯುವ ಮೂಲಕ ಪ್ರವೇಶಾತಿಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಕರಾಮುವಿ ಮಡಿಕೇರಿ ಪ್ರಾದೇಶಿಕ ಕೇಂದ್ರದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿ ಪ್ರವೇಶಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸ್ನಾತಕ, ಸ್ನಾತಕೋತ್ತರ ಕೋರ್ಸ್‍ಗಳಾದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಲಿಬ್‍ಐಎಸ್ಸಿ, ಬಿಎಸ್ಸಿ(ಜನರಲ್ ಐಟಿ), ಬಿಎಸ್‍ಡಬ್ಲ್ಯು, ಎಂಎ, ಎಂಸಿಜೆ, ಎಂ.ಕಾಂ, ಎಂಎಸ್ಸಿ, ಎಂಲಿಬ್‍ಐಎಸ್ಸಿ, ಎಂಬಿಎ, ಎಂಸಿಎ, ಎಐಸಿಟಿಇ ಅಪ್ರೋವ್‍ಡ್) ಎಂಎಸ್‍ಡಬ್ಲ್ಯು ಮತ್ತು ಪಿಜಿ ಸರ್ಟಿಫಿಕೇಟ್ ಡಿಪ್ಲೋಮಾ ಸರ್ಟಿಫಿಕೇಟ್ ಪ್ರೋಗ್ರಾಮ್ಸ್‍ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. 

ಕೆಎಸ್‍ಒಯು ಯುಜಿಸಿ/ ಮಾನ್ಯತೆ ಪಡೆದಿದೆ ಮತ್ತು ನ್ಯಾಕ್‍ನಿಂದ ಎ+ ಮಾನ್ಯತೆ ಪಡೆದಿದೆ. ಯುಜಿಸಿ ನಿಯಮಾವಳಿ ಪ್ರಕಾರ ಮುಕ್ತ ವಿಶ್ವವಿದ್ಯಾನಿಲಯ ನೀಡುವ ಪದವಿಗಳು ರೆಗ್ಯುಲರ್‍ಮೂಲಕ ನೀಡುವ ಪದವಿಗಳಿಗೆ ಸಮನಾದ ಅರ್ಹತೆ ಇರುತ್ತದೆ ಎಂದು ಹೇಳಿದ್ದಾರೆ.

ಹೆಚ್ಚಿನ ವಿವರಗಳಿಗೆ ಕರಾಮುವಿ ಪ್ರಾದೇಶಿಕ ನಿರ್ದೇಶಕರು ಮಡಿಕೇರಿ ಪ್ರಾದೇಶಿಕ ಕೇಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣ ಕಟ್ಟಡ, ಮಡಿಕೇರಿ-571201 ಹಾಗೂ ದೂ.ಸಂ. 9483570900, 9844395986, 8296215714, 9483570900 ಹಾಗೂ 7411233007 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ಅವರು ತಿಳಿಸಿದ್ದಾರೆ.

Exit mobile version