Site icon nadubadenews.com

ಮಾರ್ಚ್‌ 8ರಂದು ಮಡಿಕೇರಿಯಲ್ಲಿ ಉದ್ಯೋಗಮೇಳ

ಮಾರ್ಚ್‌ 8ರಂದು ಮಡಿಕೇರಿಯಲ್ಲಿ ಉದ್ಯೋಗಮೇಳ
ಮಾರ್ಚ್‌ 8ರಂದು ಮಡಿಕೇರಿಯಲ್ಲಿ ಉದ್ಯೋಗಮೇಳ

ಮಡಿಕೇರಿ, ಮಾ:02:- ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಮಾರ್ಚ್, 08 ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಜಿಲ್ಲಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಡೆಯಲಿದೆ ಎಂದು ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಪ್ರಕಾಶ್ ಮೀನಾ ಅವರು ತಿಳಿಸಿದ್ದಾರೆ.

ಸಂಜೀವಿನಿ ಕೆಎಸ್‍ಆರ್‍ಎಲ್‍ಪಿಎಸ್ನ ಡಿಡಿಯುಜಿಕೆವೈ ಯೋಜನೆಯಡಿ ಉದ್ಯೋಗ ಮೇಳವನ್ನು ಏರ್ಪಡಿಸಲು ತಿಳಿಸಿದ್ದು, ಜಿಲ್ಲೆಯ ಕನಿಷ್ಠ 800 ಅಭ್ಯರ್ಥಿಗಳಿಗೆ ಉದ್ಯೋಗದಾತ ಸಂಸ್ಥೆಗಳ ಮೂಲಕ ಉದ್ಯೋಗವಕಾಶ ಕಲ್ಪಿಸಲಾಗುತ್ತದೆ.

ಈ ಉದ್ಯೋಗ ಮೇಳದಲ್ಲಿ ಹಲವಾರು ಪ್ರತಿಪ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು, ಸ್ಥಳದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸಿ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಆದ್ದರಿಂದ ಜಿಲ್ಲೆಯ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ/ ಯುವತಿಯರು ಈ  ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ  ಕೋರಲಾಗಿದೆ.

Exit mobile version