Site icon nadubadenews.com

ಪೈಪೋಟಿ ಕಳಕ್‌ ಇಳ್ಂಜ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ

ಪೈಪೋಟಿ ಕಳಕ್‌ ಇಳ್ಂಜ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ
Spread the love
ಪೈಪೋಟಿ ಕಳಕ್‌ ಇಳ್ಂಜ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ

ಬೆಂಗಳೂರ್‌, ಮೇ.19: (nadubade news): ಬೆಂಗಳೂರ್‌ ಕೊಡವ ಸಮಾಜತ 2025 -2028ನೇ ಮೂಂದ್‌ ಕಾಲತ ಆಡಳಿತಮಂಡಳಿರ ಪೈಪೋಟಿ ಕಳಕ್‌ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ ಇಳ್ಂಜಿತ್.‌

        ಬಪ್ಪ ಜುಲೈಲ್‌ ನಡ್ಪಕುಳ್ಳ ಬೆಂಗಳೂರ್‌ ಕೊಡವ ಸಮಾಜ ಆಡಳಿತ ಮಂಡಳಿ ಚುನಾವಣೆ‌ ಕೈಂಜ ಅಂಜಾರ್‌ ತಿಂಗತಿಂಜೇ ಬಿರ್ಸ್‌ ಪಡ್ಂದಂಡ್‌ ಸದ್ದ್‌ ಮಾಡ್ಯಂಡುಂಡ್.‌ ಸುಮಾರಾಳ್‌ ಇಕ್ಕಾಕಲೇ ತರಾವರಿ ಜವಾಬ್ದಾರಿರ ಜಾಗಕ್ಕಾಯಿತ್‌ ತಯಾರ್‌ ಮಾಡ್ಯಂಡುಂಡ್.‌  ಈ ಸಾಲ್‌ಲ್‌ ಕೇಳಿಪೋನ ಸಮಾಜಸೇವಕ, ಐರನ್‌ ಕಾಳಂದೇ ಪೆದ ಪೋಯಿತುಳ್ಳ ಬಾಳೆಯಡ ಕರುಣ್‌ ಕಾಳಪ್ಪ ಅಧ್ಯಕ್ಷ ಸ್ಥಾನಕಾಯಹಿತ್‌ ಪೈಪೋಟಿಕ್‌ ಇಳ್ಂಜಕ, ಇಯಂಗಡ ಕೂಡ್‌ಕೂಟತ್‌, ಉಪಾಧ್ಯಕ್ಷಿಣಿ ಸ್ಥಾನಕ್‌, ಬೆಂಗಳೂರ್‌ ಕೊಡವ ಸಮಾಜ ಪಿಂಞ ಜನಾಂಗಕಾಯಿತ್‌ ಸುಮಾರ್‌ ಕಾಲತೊಟ್ಟ್‌ ಎಲೆಮರೆ ಕಾಯಿರ ಪೋಲೆ ನೈಚಂಡುಳ್ಳ ಪೆಮ್ಮಂಡ ವೀಣದೇವಯ್ಯ, ಗೌರವ ಕಾರ್ಯದರ್ಶಿ ಸ್ಥಾನಕ್‌, ಕೊಡವಾಮೆರ ಕೋವುಲ್‌ ಕೊಡವು, ಬೆಂಗಳೂರ್‌ಲ್‌  ತಾಂಡದೇ ಆನ ಪುಡ್ತ, ಪುರ್‌ಡ್‌ಲ್‌ ನೈಚಂಡುಳ್ಳ ಅಲ್ಲಪ್ಪಿರ ಪೂವಪ್ಪ,  ಕೂಡ್‌ಕಾರ್ಯದರ್ಶಿಕ್‌ ಮಾಳೇಟಿರ ರಾಜತಿಮ್ಮಯ್ಯ, ಖಜಾಂಚಿ ಸ್ಥಾನಕ್ ಕಾಡ್ಯಮಾಡ ಸಂಜಯ್‌, ಕೂಡ್‌ ಖಜಾಂಚಿ ಸ್ಥಾನಕ್ಕಾಯಿತ್‌ ಉಡುವೆರ ಸುರೇಶ್‌ ಪೊನ್ನಪ್ಪ ಅವು ಪೈಪೋಟಿ ಕಳಕ್‌ ಇಳ್ಂಜಿತ್.‌

        ಲಗಾಯಿತಿಂಜ ಕೊಡವಾಮೆರ  ನಳವಾಯಿತ್‌, ಕೊಡವ ಸಮಾಜಕೆಲ್ಲ ಐನ್‌ ಮನೆರ ಪೋಲೆ ಉಳ್ಳ ಬೆಂಗಳೂರ್‌ ಕೊಡವ ಸಮಾಜತ್‌ ಓರ್‌ ಪುದಿಯಾಮೆರ ಬದಲಾಣೆ ಬರೋಂಡು, ಅದಂಡ ಕೂಟ್‌ಕ್‌, ಸಮಾಜ ಸದಸ್ಯಂಗಳೇ ಅಲ್ಲತೆ, ಬೆಂಗಳೂರ್‌ಲ್‌ ನೆಲೆ ನಿಂದಿತುಳ್ಳ ಸುಮಾರ್‌ 40000+ ಕೊಡವಕೂ ನೇರ್‌ ನಲ್ಲಾಮೆರ ನಳ ಆಯಿತ್‌,  ನಂಗಡ ಮೂಲ ಬೇರ್‌  ಕೊಡವುರ ಬಾಳ್‌ ಬವುಸ್‌ಕಾಯಿತ್‌ ಪುದಿಯಾಮೆಲ್‌ ನೈಪಕ್‌ ಪಲತರ ಗ್ಯಾನ ಯೋಜನೆಲ್‌ ಪೈಪೋಟಿಕ್‌ ಇಳ್ಂಜಿತುಳ್ಳ ನಂಗಕ್‌ ಮಾಜನ ಆರಗೆಜ್ಜಿತ್‌, ಗೆಲ್ಲ್‌ಚಿಟ್ಟಿತ್‌ ಬದಲಾವಣೆಕ್‌ ಮೊಳಿಯಾಂಡೂಂದ್‌ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ ಕೇಟಂಡಿತ್.‌

Exit mobile version