Site icon nadubadenews.com

ನಾಳೆ ಮಡಿಕೇರಿಯಲ್ಲಿ ಪೊಲೀಸರ ಓಟ…

ನಾಳೆ ಮಡಿಕೇರಿಯಲ್ಲಿ ಪೊಲೀಸರ ಓಟ…
ನಾಳೆ ಮಡಿಕೇರಿಯಲ್ಲಿ ಪೊಲೀಸರ ಓಟ…

ಮಡಿಕೇರಿ ಮಾ.08:- ಮಾದಕ ವ್ಯಸನಮುಕ್ತ ಕೊಡಗು ಜಾಗೃತಿಗಾಗಿ ನಾಳೆ ಮಡಿಕೇರಿಯಲ್ಲಿ ಪೊಲೀಸರ ಓಟ ನಡೆಯಲಿದೆ.

ಕೊಡಗು ಜಿಲ್ಲಾ ಪೊಲೀಸ್, ಕರ್ನಾಟಕ ರಾಜ್ಯ ಪೊಲೀಸ್ ರನ್ ವತಿಯಿಂದ ಮಾರ್ಚ್, 09ನೇ ಭಾನುವಾರ ಬೆಳಗ್ಗೆ 8 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಪ್ರಾರಂಭಗೊಂಡು, ಡಿ.ಆರ್.‌ ಪೊಲೀಸ್‌ ಮೈದಾನದವರೆಗೆ, ಡ್ರಗ್ಸ್ ಮುಕ್ತ ಕೊಡಗು ಜಿಲ್ಲೆ ನಿರ್ಮಿಸಲು ಬನ್ನಿ ನಮ್ಮೊಂದಿಗೆ ಹೆಜ್ಜೆ ಹಾಕಿ ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಅವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪೊಲೀಸ್‌ ಅಧಿಕಾರಿಗಳು, ಸಿಬ್ಬಂಧಿಗಳು ಪಾಲ್ಗೊಳ್ಳಲಿದ್ದು, ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ, ಜಿಲ್ಲಾ ಪೊಲೀಸ್ ಇಲಾಖೇ ಪ್ರಕಟಣೆಯಲ್ಲಿ ಕೋರಿದೆ.

Exit mobile version