Site icon nadubadenews.com

  ನಾಳೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಯೋಗದಿನಾಚರಣೆ  

  ನಾಳೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಯೋಗದಿನಾಚರಣೆ  
Spread the love
  ನಾಳೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಯೋಗದಿನಾಚರಣೆ  

      ಪೊನ್ನಂಪೇಟೆ, ಜೂ.20.(nadubadenews): ನಾಳೆ ಪೊನ್ನಂಪೇಟೆ  ರಾಮಕೃಷ್ಣ ಆಶ್ರಮದಲ್ಲಿ 11ನೇ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10. 30 ರಿಂದ 11 ಗಂಟೆ ತನಕ ಸಭಾ ಕಾರ್ಯಕ್ರಮ ಜರುಗಲಿದ್ದು, ನಂತರ 11 ಗಂಟೆಯಿಂದ 12:30 ರವರೆಗೆ  ಯೋಗಬ್ಯಾಸ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ  ಎ. ಎಸ್. ಪೊನ್ನಣ್ಣ, ಕೊಡಗು ಜಿಲ್ಲಾಧಿಕಾರಿಗಳಾದ ವೆಂಕಟರಾಜು, ಪೊನ್ನಂಪೇಟೆ ತಹಶೀಲ್ದಾರ್ ಮೋಹನ್ ಕುಮಾರ್, ಕೊಡಗು ಜಿಲ್ಲಾ ಆಯುಷ್ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ಜಿ. ಶೈಲಜ, ಮಡಿಕೇರಿಯ ಆಯುಷ್ ಸಂಸ್ಥೆಯ ಮುಖ್ಯ ವೈದ್ಯಧಿಕಾರಿಗಳಾದ ಡಾಕ್ಟರ್ ಅರುಣ್ ಪಿ.ಜಿ ಪಾಲ್ಗೊಳ್ಳಲಿದ್ದಾರೆ ಎಂದು ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಪರಹಿತಾನಂದ  ಸ್ವಾಮೀಜಿ ತಿಳಿಸಿದ್ದಾರೆ.

Exit mobile version