Site icon nadubadenews.com

ಕ್ರೀಡಾಶಾಲೆ/ ವಸತಿನಿಲಯಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ವಿಶೇಷ ಆಯ್ಕೆ ಶಿಬಿರ

ಕ್ರೀಡಾಶಾಲೆ/ ವಸತಿನಿಲಯಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ವಿಶೇಷ ಆಯ್ಕೆ ಶಿಬಿರ
ಕ್ರೀಡಾಶಾಲೆ/ ವಸತಿನಿಲಯಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ವಿಶೇಷ ಆಯ್ಕೆ ಶಿಬಿರ

ಮಡಿಕೇರಿ ಏ.10:-  ಪ್ರಸಕ್ತ(2025-26) ಸಾಲಿಗೆ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ  8 ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿಗೆ ಈಗಾಗಲೇ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಅವಕಾಶ ವಂಚಿತರಾದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆಯನ್ನು ಏಪ್ರಿಲ್, 15 ರಂದು ಹಾಕಿ ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣ, ಜಿಮ್ನಾಸ್ಟಿಕ್ಸ್ ತುಮುಕೂರು ಜಿಲ್ಲಾ ಕ್ರೀಡಾಂಗಣದಲ್ಲಿ, ಫುಟ್ಬಾಲ್ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಏಪ್ರಿಲ್, 17 ರಂದು ಅಥ್ಲೆಟಿಕ್ಸ್, ಬಾಸ್ಕೇಟ್ ಬಾಲ್, ವಾಲಿಬಾಲ್ ಮತ್ತು ಕಬಡ್ಡಿ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.            

     ಹೆಚ್ಚಿನ ಮಾಹಿತಿಗೆ ದೂ.ಸಂ.08272220986 ಮತ್ತು  9480032712 ಸಂಪರ್ಕಿಸಬಹುದು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲೆ, ಇವರ ವತಿಯಿಂದ ಆಯೋಜಿಸಲಾದ ವಿವಿಧ ಕ್ರೀಡೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಈಗಾಗಲೇ ಭಾಗವಹಿಸಿರುವ ಕ್ರೀಡಾಪಟುಗಳು ‘ವಿಶೇಷ ಆಯ್ಕೆ ಶಿಬಿರದಲ್ಲಿ’ ಭಾಗವಹಿಸಲು ಅರ್ಹರಿರುವುದಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ತಿಳಿಸಿದ್ದಾರೆ.

Exit mobile version