Site icon nadubadenews.com

ಕೊಡಗಿನಲ್ಲಿ ಮೀನು ಹಿಡಿಯುವ ಹಾಗಿಲ್ಲ…

ಕೊಡಗಿನಲ್ಲಿ ಮೀನು ಹಿಡಿಯುವ ಹಾಗಿಲ್ಲ…
Spread the love
ಕೊಡಗಿನಲ್ಲಿ ಮೀನು ಹಿಡಿಯುವ ಹಾಗಿಲ್ಲ…

ಮಡಿಕೇರಿ ಮೇ.30(Nadubade News): ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆಗಳು ನಡೆಯುವುದರಿಂದ  ಪ್ರತಿ ವರ್ಷದ ಜೂನ್ 01 ರಿಂದ ಜುಲೈ 30 ರವರೆಗೆ  ರಾಜ್ಯದ  ಎಲ್ಲಾ  ಸರ್ವಋತು ಕೆರೆಗಳು, ಜಲಾಶಯಗಳು ತೊರೆಗಳು, ಕಣಿವೆಗಳು ಮತ್ತು ನದಿಗಳಲ್ಲಿ ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.

   ಈ ಅವಧಿಯು ಮೀನಿನ ಜೀವನ ಚಕ್ರದಲ್ಲಿ ಅತಿಮುಖ್ಯವಾದ ಘಟ್ಟವಾಗಿದೆ. ಸ್ಥಳೀಯ ತಳಿಗಳು ಮುಂದಿನ ಪೀಳಿಗೆಗೆ  ತಮ್ಮ  ಸಂತತಿಯನ್ನು ನೀಡುವ  ಸಮಯವಾಗಿರುವುದರಿಂದ  ಈ  ಅವಧಿಯಲ್ಲಿ ಜಿಲ್ಲೆಯ ಸಾರ್ವಜನಿಕರು ಹಾಗೂ ಮೀನುಗಾರರು ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು ತೊರೆಗಳು, ಅಳಿವೆಗಳು ಮತ್ತು ನದಿಗಳಲ್ಲಿ, ಮೀನುಗಳನ್ನು  ಜೂನ್ ಮತ್ತು ಜುಲೈ ಈ  ಎರಡು ತಿಂಗಳು ಹಿಡಿಯದೇ ಅವುಗಳ ಸಂತಾನ ಅಭಿವೃದ್ದಿಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟು ಮೀನಿನ ಸ್ಥಳೀಯ ತಳಿಗಳ ಸಂರಕ್ಷಣಿಯಲ್ಲಿ ಇಲಾಖೆಯೊಂದಿಗೆ ಸಹಕರಿಸುವಂತೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Exit mobile version