Site icon nadubadenews.com

ಕಟ್ಟೆಮಾಡ್‌ ಮಾದೇವ ದೇವಾಲಯ ಬಳಿ ನಿಷೇದಾಜ್ಞೆ ಮುಂದುವರೆಸಿ ಉಪ ವಿಭಾಗಾಧಿಕಾರಿ ಆದೇಶ

ಕಟ್ಟೆಮಾಡ್‌ ಮಾದೇವ ದೇವಾಲಯ ಬಳಿ ನಿಷೇದಾಜ್ಞೆ ಮುಂದುವರೆಸಿ ಉಪ  ವಿಭಾಗಾಧಿಕಾರಿ ಆದೇಶ
ಕಟ್ಟೆಮಾಡ್‌ ಮಾದೇವ ದೇವಾಲಯ ಬಳಿ ನಿಷೇದಾಜ್ಞೆ ಮುಂದುವರೆಸಿ ಉಪ  ವಿಭಾಗಾಧಿಕಾರಿ ಆದೇಶ

ಮಡಿಕೇರಿ, ಮಾ.14: ಕಟ್ಟೆಮಾಡ್‌ ಬಳಿಯ ಪುರಾತನ ಮಾದೇವರ ದೇವಾಲಯದ ವಾರ್ಷಿಕೋತ್ಸವದಂದು ಕೊಡವ ಕುಪ್ಯಚಾಲೆಗೆ ಕೆಲವರು ಮಾಡಿದ ಅವಮಾನದ ಕಾರಣಕ್ಕೆ ಉಂಟಾದ ವಿವಾದದ ಹಿನ್ನೆಲೆ, ದೇವಾಲಯ ಆವರಣದಿಂದ 200 ಮೀ. ವ್ಯಾಪ್ತಿಯಲ್ಲಿ ನಿಷೆದಾಜ್ಞೆಯನ್ನು, ದಿನಾಂಕ 11-04-2025ರ ವರೆಗೆ ಮುಂದುವರೆಸಿ ಜಿಲ್ಲಾ ಉಪ ವಿಭಾಗಾಧಿಕಾರಿ ಮತ್ತು ಉಪಾಗೀಯ ದಂಡಾಧಿಕಾರಿಗಳು, ಮಡಿಕೇರಿ ಉಪ ವಿಭಾಗ ಅವರು, ಮಾನ್ಯ ಕೊಡಗು ಜಿಲ್ಲಾ ಪೋಲೀಸ್‌ ಅದೀಕ್ಷಕರ ಕೋರಿಕೆಯಂತೆ ಆದೇಶಿಸಿದ್ದಾರೆ.

ಡಿಸೆಂಬರ್‌ 25- 2024ರಿಂದ ಈ ದೇವಾಲಯವು ರಾಷ್ಟ್ರಮಟ್ಟದ ವಿವಾಧಿತ ಕೇಂದ್ರವಾಗಿದ್ದು, ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿಯೂ ಇದೆ. ಘಟನೆ ನಡೆದಂದೀನಿಂದಲೂ ಈ ಪ್ರದೇಶದಲ್ಲಿ ನಿಷೇದಾಜ್ಞೆ ಇದ್ದು, ನಿಷೇದಿತ ಪ್ರದೇಶದಲ್ಲಿ, 4ಕ್ಕಿಂತ ಹೆಚ್ಚು ಜನರು ಗುಂಪು ಸೇರದಂತೆ ಆದೇಶವಿದ್ದು, ಭಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.

Exit mobile version