Site icon nadubadenews.com

ಓಮನ್‌ ದೇಶದಲ್ಲೂ ವಿಜ್ರಂಭಿಸಿದ ಕೊಡವ ಪೊಡಿಯ

ಓಮನ್‌ ದೇಶದಲ್ಲೂ ವಿಜ್ರಂಭಿಸಿದ ಕೊಡವ ಪೊಡಿಯ
Spread the love
ಓಮನ್‌ ದೇಶದಲ್ಲೂ ವಿಜ್ರಂಭಿಸಿದ ಕೊಡವ ಪೊಡಿಯ

ಓಮನ್ ದೇಶದ ಗ್ಲೋಬಲ್ ಅಚೀವರ್ ಅವಾರ್ಡ್ ಕಾರ್ಯಕ್ರಮವನ್ನು, ಕೊಡವತಿ ಪೊಡಿಯದಲ್ಲಿ ನಿರೂಪಣೆ ಮಾಡಿದ, ಮಣವಟ್ಟಿರ ಮೌನಮೊಣ್ಣಪ್ಪ

                ವಿರಾಜಪೇಟೆ, ಫೆ.12: ಇತ್ತೀಚೆಗೆ ದೂರದ ಓಮನ್ ದೆಶದ ರಾಜಧಾನಿ ಮಸ್ಕಟ್‌‌ನಲ್ಲಿ, ವಿಶ್ವವಾಣಿ  ಪತ್ರಿಕೆ, ಮತ್ತು ಕರ್ನಾಟಕ ಸಂಘ – ಓಮನ್‌ನ ಸಹಯೋಗದಲ್ಲಿ ನಡೆದ ವಾರ್ಷಿಕ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ, ಮಣವಟ್ಟಿರ ಮೌನ ಮೊಣ್ಣಪ್ಪ(ತಾಮನೆ: ಆಪಾಡಂಡ) ಅವರು, ಕೊಡವತಿ ಪೊಡಿಯ ಉಟ್ಟು, ನಿರರ್ಗಳ ಕನ್ನಡದಲ್ಲಿ ನಿರೂಪಣೆ ಮಾಡುವ ಮೂಲಕ, ಅಥಿಗಳಿಂದ ಪ್ರಶಂಸೆಯ ಜೊತೆಗೆ ಸನ್ಮಾನ ಪಡೆದರು.

                ವಿಶ್ವವಾಣಿ ಪತ್ರಿಕೆಯು ಕೊಡಮಾಡುವ ವಾರ್ಷಿಕ ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮವು ಓಮನ್‌‌ನ ರಾಜಧಾನಿ ಮಸ್ಕತ್‌‌ನಲ್ಲಿ ನಡೆಯಿತು.  ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್, ಶಾಸಕ ಸಿ.ಟಿ.ರವಿ, ಜಯಮೃತ್ಯುಂಜಯ ಸ್ವಾಮೀಜಿ, ಮಾಜೀ ಸಚಿವ ಹರತಾಳು ಹಾಲಪ್ಪ, ಮಾಜೀ ಶಾಸಕ ರಘುಪತಿ ಭಟ್, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಮುಂತಾದ ಗಣ್ಯರು ಉಪಸ್ಥಿತರಿದ್ದ ವೇದಿಕೆಯಲ್ಲಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾದ ಕನ್ನಡದಲ್ಲಿ ನಿರೂಪಣೆ ಮಾಡಿದ  ತನ್ನ ವಿಶಿಷ್ಟ ಶೈಲಿ, ಮತ್ತು  ಹೆಮ್ಮೆಯ ಕೊಡವ ಉಡುಪನ್ನು ಗಮನಿಸಿದ ಗಣ್ಯರು, ವೇದಿಕೆಯ ಮೇಲೆ  ಮಣವಟ್ಟಿರ ಮೌನ ಮೊಣ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು. ವಿದೇಶದಲ್ಲೂ ಕೊಡವತನ ಮತ್ತು ಮೂಲ ಉಡುಪನ್ನು  ಪ್ರತಿಬಿಂಬಿಸಿದ ಹೆಮ್ಮೆಯ ಕೊಡವತಿ ಮಣವಟ್ಟಿರ ಮೌನ ಮೊಣ್ಣಪ್ಪ, ಕ್ಯಾತ ಕೊಡವ ಕವಿ, ಹಾಡುಗಾರ ಆಪಾಡಂಡ ಜಗಮೊಣ್ಣಪ್ಪ ಕುಸುಮಾ ಮೊಣ್ಣಪ್ಪ ಅವರ ಪುತ್ರಿ, ಮಣವಟ್ಟಿರ ಆಕಾಶ್ ಪೂಣಚ್ಚ ಅವರ ಪತ್ನಿ.

Exit mobile version