Site icon nadubadenews.com

ಏಖ್‌ ಭಾರತ್ ಅಭಿಯಾನದ ಪೋಸ್ಟರ್‌ ವಿತರಣೆ

ಏಖ್‌ ಭಾರತ್ ಅಭಿಯಾನದ ಪೋಸ್ಟರ್‌ ವಿತರಣೆ
Spread the love
ಏಖ್‌ ಭಾರತ್ ಅಭಿಯಾನದ ಪೋಸ್ಟರ್‌ ವಿತರಣೆ

ಗೋಣಿಕೊಪ್ಪ, ಫೆ.20: ಜೋಯಪ್ಪ ಅಚ್ಚಯ್ಯ ಸ್ಥಾಪಿತ  ಏಖ್ ಭಾರತ್ ಅಭಿಯಾನ ಫೌಂಡೇಶನ್ ವತಿಯಿಂದ  ಒಂದು ರಾಷ್ಟ್ರ, ಒಂದು ಧ್ವಜದ ಬಗ್ಗೆ ಮತ್ತು ನಮ್ಮ ರಾಷ್ಟ್ರಗೀತೆಯ ಅರ್ಥವನ್ನು ಎಲ್ಲಾ ಭಾರತೀಯರಿಗೆ ಅರಿವು ಮತ್ತು ಪ್ರಚಾರ ಮಾಡುವ ಸಲುವಾಗಿ‌, ಗೋಣಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು  ಸರಕಾರಿ ಪ್ರೌಢಶಾಲೆಗಳಿಗೆ ಈ ಕುರಿತಾದ ಪೋಸ್ಟರ್ ಅನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಏಖ್ ಭಾರತ್ ಅಭಿಯಾನ ಫೌಂಡೇಶನ್ ಜಿಲ್ಲಾಧ್ಯಕ್ಷರಾದ  ಕೆ.ಎಸ್. ರಾಜೇಶ್ ಅವರು, ಒಂದು ರಾಷ್ಟ್ರ, ಒಂದು ಧ್ವಜದ ಬಗ್ಗೆ ಮತ್ತು ನಮ್ಮ ರಾಷ್ಟ್ರಗೀತೆಯ ಅರ್ಥವನ್ನು ಅರಿಯುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಎರಡು ಶಾಲೆಗಳ ಮುಖ್ಯ್ಯೋಪಾಧ್ಯಾಯರುಗಳಾದ  ಹೆಚ್. ಎಂ. ರತೀಶ್ ರೈ ಹಾಗೂ ಹೆಚ್. ಎಂ. ಕುಮಾರ್ ಅವರು ಏಖ್ ಭಾರತ್ ಅಭಿಯಾನ ಫೌಂಡೇಶನ್ ನ ಆಶಯದಂತೆ  ಒಂದು ರಾಷ್ಟ್ರ, ಒಂದು ಧ್ವಜದ ಬಗ್ಗೆ ಮತ್ತು ನಮ್ಮ ರಾಷ್ಟ್ರಗೀತೆಯ ಅರ್ಥವನ್ನು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಪಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಶ್ರಮಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷವೃಂದ, ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.

Exit mobile version