Site icon nadubadenews.com

ಇದೊಂದು ಖೋತಾ ಬಡ್ಜೆಟ್‌:  ಅಪ್ಪಚ್ಚು ರಂಜನ್‌ ವ್ಯಂಗ್ಯ

ಇದೊಂದು ಖೋತಾ ಬಡ್ಜೆಟ್‌:  ಅಪ್ಪಚ್ಚು ರಂಜನ್‌  ವ್ಯಂಗ್ಯ
Spread the love
ಇದೊಂದು ಖೋತಾ ಬಡ್ಜೆಟ್‌:  ಅಪ್ಪಚ್ಚು ರಂಜನ್‌  ವ್ಯಂಗ್ಯ

ಮಡಿಕೇರಿ, ಮಾ. 07: ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಡ್ಜೆಟ್‌ ಅವರ ಹೆಸರಿಗೆ ಮಾತ್ರ ದಾಖೆಲೇಯಾಗಿದ್ದು, ಒಟ್ಟಾರೆಯಾಗಿ ಇದೊಂದು ಖೋತಾ ಬಡ್ಜೆಟ್‌ ಆಗಿದೆ. ಇದರಿಂದ ಜಿಲ್ಲೆಗೆ ಮಾತ್ರ ಅಲ್ಲ ರಾಜ್ಯ್ಕಕೇ ಬಿಡಿಗಾಸು ಉಪಯೋಗ ಇಲ್ಲ ಎಂದು ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್‌ ಹೇಳಿದ್ದಾರೆ.

          ಇಂದು ಮಂಡಿಸಿರುವ ರಾಜ್ಯ ಬಡ್ಚೆಟ್ಟ್‌ ದೂರದೃಷಗಟಿ ಇಲ್ಲದ, ಮತ್ತು ಆರ್ಥಿಕ ಹಿಡಿತ ವಿಲ್ಲದ ಸಾಲದ ಬಡ್ಜೆಟ್‌ ಆಗಿದೆ. ಇದರಿಂದ ರಾಜ್ಯ ಅಭಿವೃದ್ದಿಯ ನಿರೀಕ್ಷೆ  ಮಾಡಲು ಸಾಧ್ಯವಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ  ಪ್ರತೀ ಮುಂಗಡ ಪತ್ರದಲ್ಲಿಯೂ ಕೊಡಗು ಜಿಲ್ಲೆಗೆ ವಿಶೇಷ ಅನುದಾನ ಮೀಸಲಿಡುತಿದ್ದರು.  ಸದಾನಂದ ಗೌಡರು 150ಕೋಟಿ ನೀಡಿದ್ದರೆ, ಯಡಿಯೂರಪ್ಪ ಅವರು ಪ್ರತೀ ಭಾರಿಯೂ 100 ಕೋಟಿ ಪ್ಯಾಕೇಜ್‌ ನೀಡುತಿದ್ದರು, ಆದರೆ ಈ ಬಡ್ಜೆಟ್‌ನಲ್ಲಿ ಒಂದೆರಡು ಆಸ್ಪತ್ರೆ ಮತ್ತು, ಕ್ರೀಡಾ ಹಾಸ್ಟೆಲ್‌ಗೆ 3ಕೋಟಿ ಅನುದಾನ ಬಿಟ್ಟರೆ ಬೇರೆ ಯಾವುದೇ ವಿಷೇಶ ಅನುದಾನ ಇಲ್ಲ. ಅನುದಾನ ನೀಡದಿರಲು ಕಾರಣ ರಾಜ್ಯದ ಬೊಕ್ಕಸ ಬರಿದಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

          ಕೊಡಗಿನ ಶಾಸಕರು ಕೇವಲ ಮುಖ್ಯ ಮಂತ್ರಿಗಳನ್ನು ಹೊಗಳುವುದನ್ನು ಬಿಟ್ಟು ಅನುದಾನ ತರಲಿ, ನನ್ನ ಅವಧಿಯಲ್ಲಿ ಬಂದಿರುವ ಯೋಜನೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿ ಎಂದರಲ್ಲದೆ. ಈ ಬಡ್ಜೆಟ್‌ನಲ್ಲಿ ಜನರಿಗೆ ನಿರೀಕ್ಷೆಗಳೇ ಇರಲಿಲ್ಲ ಹಾಗಾಗಿ ಇದಕ್ಕೆ ಮನ್ನಣೆ ಕೊಡುವ ಅಗತ್ಯ ಇಲ್ಲಾ ಎಂದಿದ್ದಾರೆ.

Exit mobile version