Site icon nadubadenews.com

ಇದು ಅಲ್ಪ ಸಂಖ್ಯಾತರ ಬಡ್ಜೆಟ್‌ : ನೆಲ್ಲಿರ ಚಲನ್‌ ಕುಮಾರ್‌  

ಇದು ಅಲ್ಪ ಸಂಖ್ಯಾತರ ಬಡ್ಜೆಟ್‌ : ನೆಲ್ಲಿರ ಚಲನ್‌ ಕುಮಾರ್‌  
ಇದು ಅಲ್ಪ ಸಂಖ್ಯಾತರ ಬಡ್ಜೆಟ್‌ : ನೆಲ್ಲಿರ ಚಲನ್‌ ಕುಮಾರ್‌  

ಬಿರುನಾಣಿ, ಮಾ.07:  ಇಂದು ಸಿದ್ದರಾಮಯ್ಯ ಅವರು ಮಂಡಿಸಿರುವುದು, ರಾಜ್ಯ ಸರ್ಕಾರದ ಬಡ್ಜೆಟ್‌ ಅಲ್ಲ ಬದಲಿಗೆ ಅಲ್ಪಸಂಕ್ಯಾತರ ಬಡ್ಜೆಟ್‌ ಎಂದು ಬಾಜಪಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್‌ ಕುಮಾರ್‌ ಅಭಿಪ್ರಾಯಿಸಿದ್ದಾರೆ.

          ಸಿದ್ದರಾಮಯ್ಯ ಮುಖ್ಯ ಮಂತ್ರಿ ಆದಾಗಿನಿಂದಲೇ ಅಲ್ಪ ಸಂಖ್ಯಾತರ ಶುಕ್ರದೆಸೆ ಪ್ರಾರಂಭವಾಗಿದೆ. ಅವರಿಂದ ಈ ಘೋಷಣೆಗಳು ನಿರೀಕ್ಷಿತವೇ ಆಗಿತ್ತು, ಜನರ ಕಲ್ಯಾಣ ಮಾಡಲು, ರಾಜ್ಯದ ಅಭಿವೃದ್ದಿ ಮಾಡಲು ಅನುದಾನದ ಕೊರತೆ ಇರುವ ಸಿದ್ದರಾಮಯ್ಯ ಅವರಿಗೆ ಮುಂದಿನ ಕಾಂಗ್ರೆಸ್‌ ಓಟ್‌ ಬ್ಯಾಂಕ್‌ ಗಟ್ಟಿಗೋಳಿಸಲು  ಒಂದು ವರ್ಗದ ಓಲೈಕೆ ಅನಿವಾರ್ಯವಾಗಿತ್ತು. ಹಾಗಾಗಿ ಈ ಘೋಷಣೆಗಳನ್ನು ಮಾಡಿದ್ದು, ದುರಂತ ಎಂದರೆ ಅವರಿಗೂ ಘೋಷಿಸಿರುವ ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಸರ್ಕಾರದ ಬೊಕ್ಕಸದಲ್ಲಿ ಹಣವೇ ಇಲ್ಲ. ಹೀಗಿರುವಾಗ ಮತ್ತೊಮ್ಮೆ ಅಲ್ಪ ಸಂಖ್ಯಾತರನ್ನು ಮರಳು ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದರೆ ಎಂದು  ಟೀಕಿಸಿದ್ದಾರೆ.

          ಕೊಡಗಿನ ವಿಚಾರಕ್ಕೆ ಬಂದರೆ, ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ಆಗುತ್ತಿಲ್ಲ,  ಹಿಂದಿನ ಬಿಜೆಪಿ ಸರ್ಕಾರದ ಅನುದಾನವನ್ನು ಉದ್ಘಾಟಿಸುವುದು ಬಿಟ್ಟರೆ ಈಗಿನ ಶಾಸಕರ ಅನುದಾನ ಸೊನ್ನೆ ಎಂದಿರುವ ನೆಲ್ಲಿರ ಚಲನ್‌ ಅವರು, ಈ ಮುಂಗಡ ಪತ್ರದಲ್ಲಿಯೂ ಕೊಡಗಿಗೆ  ಹೇಳಿಕೊಳ್ಳಲಾದರೂ ಯಾವುದಾದರೊಂದು ಯೋಜನೆಯನ್ನು ಘೋಷಿಸ ಬಹುದಿತ್ತು ಆದರೆ, ಸಿದ್ದರಾಮಯ್ಯ ತಾನು ಕೊಡಗಿನ ವಿರೋಧಿ ಎನ್ನುವುದನ್ನು, ಕೊಡಗಿಗೆ ಬಡ್ಜೆಟ್ಟ್‌ನಲ್ಲಿ ಶೂನ್ಯ ಘೋಷಣೆಯೊಂದಿಗೆ ಮತ್ತೊಮ್ಮೆ ಸಾಭೀತು ಮಾಡಿದ್ದಾರೆ. ಇದು ನಿರೀಕ್ಷತ  ನೀರಸ ಬಜೆಟ್‌ ಎಂದಿದ್ದಾರೆ.

Exit mobile version