Site icon nadubadenews.com

ಆರೋಪಿಯ ಜಾಮೀನು ರದ್ದತಿಗೆ ಕೋರ್ಟ್‌ಗೆ ಮನವಿ ಸಲ್ಲಿಸಿದ ಪೊಲೀಸರು

ಆರೋಪಿಯ ಜಾಮೀನು ರದ್ದತಿಗೆ ಕೋರ್ಟ್‌ಗೆ ಮನವಿ ಸಲ್ಲಿಸಿದ ಪೊಲೀಸರು
Spread the love
ಆರೋಪಿಯ ಜಾಮೀನು ರದ್ದತಿಗೆ ಕೋರ್ಟ್‌ಗೆ ಮನವಿ ಸಲ್ಲಿಸಿದ ಪೊಲೀಸರು

ನಡುಬಾಡೆ ನ್ಯೂಸ್, ಮಾ; 23:  ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾದ್ಯಮದಲ್ಲಿ ಸದ್ದು ಮಾಡಿದ್ದ, ನಾಪೋಕ್ಲು ಹಲ್ಲೆ ಪ್ರಕರಣದ ಆರೋಪಿಯೊಬ್ಬನ ಇನ್ಸ್ಟಾಗ್ರಾಮ್‌ ಪೋಸ್ಟ್‌ ವಿಚಾರವಾಗಿ ಸ್ವಯಂ  ಆಸಕ್ತಿಯಿಂದ ಪರಿಶೀಲನೆ ನಡೆಸಿರುವ ಕೊಡಗು ಪೊಲೀಸರು, ಆರೋಪಿಯ ಕೃತ್ಯವು ಪ್ರಚೋದನಾತ್ಮಕವಾಗಿದೆ ಎಂಬುದನ್ನು ಮನಗಂಡು, ಆತನ ವಿರುದ್ದ ಪ್ರತ್ಯೇಕ ಪ್ರಕರಣ ದಾಖಲಿಸುವ ಜೊತೆಗೆ, ಹಿಂದಿನ ಪ್ರಕರಣದಲ್ಲೂ ಜಾಮೀನು ರದ್ದುಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವುದಾಗಿ ಕೊಡಗು ಪೊಲೀಸ್‌ ಅಧಿಕ್ಷಕರ ಪ್ರಕಟಣೆ ತಿಳಿಸಿದೆ.  ಸಾಮಾಜಿಕ ಮಾದ್ಯಮವನ್ನು ಬಳಸಿಕೊಂಡು, ಯಾವುದೇ ವ್ಯಕ್ತಿ, ಜನಾಂಗ ಅಥವಾ ಧರ್ಮವನ್ನು ನಿಂದಿಸುವುದು ಮತ್ತು ಪ್ರಚೋದಿಸುವುದು, ಅಪರಾಧವಾಗಿದ್ದು, ಇಂತಃ ಕೃತ್ಯ ನಡೆಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್‌ ವರಿಷ್ಟಾಧಿಕಾರಿ ಬಿಂದುಮಣಿ ಅವರು ತಿಳಿಸಿದ್ದಾರೆ.

Exit mobile version