Site icon nadubadenews.com

ಅತ್ಯುತ್ತಮ ಬಡ್ಜೆಟ್‌ನೊಂದಿಗೆ, ಕೊಡಗಿಗೆ ಸಿಂಹಪಾಲು:  ಮಂಥರ್‌ ಗೌಡ ಸಂತಸ

ಅತ್ಯುತ್ತಮ ಬಡ್ಜೆಟ್‌ನೊಂದಿಗೆ, ಕೊಡಗಿಗೆ ಸಿಂಹಪಾಲು:  ಮಂಥರ್‌ ಗೌಡ ಸಂತಸ
Spread the love
ಅತ್ಯುತ್ತಮ ಬಡ್ಜೆಟ್‌ನೊಂದಿಗೆ, ಕೊಡಗಿಗೆ ಸಿಂಹಪಾಲು:  ಮಂಥರ್‌ ಗೌಡ ಸಂತಸ

ಬೆಂಗಳೂರು, ಮಾ.07:   ದಾಖಲೆಯ 16ನೇ ರಾಜ್ಯ ಬಡ್ಜೆಟ್‌, ಮಂಡಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿಗೆ ಸಿಂಹಪಾಲು ನೀಡಿದ್ದು ಇದೋಂದು ಅಭಿವೃದ್ದಿ ಪರ, ಸರ್ವ ಜನತೆಯ  ಬಡ್ಜೆಟ್‌ ಆಗಿದೆ ಎಂದು  ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ  ಸಂತಸ ವ್ಯಕ್ತಪಡಿಸಿದ್ದಾರೆ.

          ಕೊಡಗಿಗೆ ಈ ಬಡ್ಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ನೇರ ಮತ್ತು ಮಿಶ್ರಿತ ಯೋಜನೆಗಳನ್ನು ನೀಡಿದ್ದು, ವಿರಾಜಪೇಟೆಗೆ 400 ಹಾಸಿಗೆಗಳ ಆಸ್ಪತ್ರೆ, ಪೊನ್ನಂಪೇಟೆಗೆ ನೂತನ ECH ಆಸ್ಪತ್ರೆ, ಪೊನ್ನಂಪೇಟೆ, ವಿರಾಜಪೇಟೆ, ಮಡಿಕೇರಿ ವ್ಯಾಪ್ತಿಯ ರಸ್ತೆಗಳಿಗೆ 20ಕೋಟಿ ಅನುದಾನ, ಐದು ವಸತಿ ಶಾಲೆಗಳು, ಪ್ರೌಡಶಾಲೆಗಳು ಪದವಿಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೆ,  ಪ್ರಾಥಮಿಕ ಶಾಲೆಗಳನ್ನು ಪ್ರೌಡ ಶಾಲೆಗಳಾಗಿ ಮೇಲ್ದರ್ಜೆಗೇರಿಸುವುದು, ಕೂಡಿಗೆ ಕ್ರೀಡಾ ವಸತಿ ಶಾಲೆಗೆ 3 ಕೋಟಿ, ಮಲೆನಾಡು ಪ್ರದೇಶಭಿವೃದ್ದಿ ನಿಗಮಕ್ಕೆ ನೀಡಿರುವ 83 ಕೋಟಿ, ಮಡಿಕೇರಿ, ಮಾದಾಪುರ, ಸೋಮವಾರಪೇಟೆ, ಕೊಡ್ಲೀಪೇಟೆ  ಮಾರ್ಗವಾಗಿ ಪೆರಿಗಲ್‌ ವರೆಗಿನ 95 ಕಿ.ಮಿ. ಹೆದ್ದಾರಿ ಯೋಜನೆ, ಅಲ್ಲದೆ ಮುಖ್ಯಮಂತ್ರಿಗಳ ಪ್ರಗತಿ ಪಥ  ನೂತನ ಯೋಜನೆಯಡಿಯಲ್ಲಿ ಒಟ್ಟು 8000 ಕೋಟಿ ಅನುದಾನ ಮೀಸಲಿಟ್ಟಿದ್ದು, ಅದರಲ್ಲೂ ಕೊಡಗಿಗೆ ಸಿಂಹ ಪಾಲು ಬರಲಿದೆ.  ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಕ್ಕ ಕೆಫೆ ಪ್ರಾರಂಭವಾಗಲಿದೆ,  ಅಥಿತಿ ಶಿಕ್ಷಕರು, ಬಿಸಿಯೂಟ ತಯಾರಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರ ಮಾಶಾಸನ ಹೆಚ್ಚಳ ಮಾಡಲಾಗಿದೆ.      DCC ಮತ್ತು PEACARD ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿ ಮನ್ನದಲ್ಲಿಯೂ ಜಿಲ್ಲೆಯ ಜನತೆಗೆ ಉಪಯೋಗವಿದೆ.  ಕುಡಿಯ,  ಯರವ ಮಲೆಕುಡಿಯ ಸೇರಿದಂತೆ ಹಿಂದುಳಿದ ಜನಾಂಗಗಳಿಗೆ ವಿಷೇಶ ಯೋಜನೆಯನ್ನು ನೀಡಲಾಗಿದೆ. ವನ್ಯಜೀವಿ ಧಾಳಿಯಿಂದ ಆಗುವ ಜೀವ ಹಾನಿ ಪರಿಹಾರವನ್ನೂ ಹೆಚ್ಚಿಸಲಾಗಿದೆ. ಹಿಂದೆ ಹೇಳಿದಂತೆ ಆನೆ ಪುನರ್ವಸತಿ  ಯೋಜನೆಯನ್ನು ಘೋಷಿಸಲಾಗಿದೆ. ಹಾಗೇ ಎಲ್ಲಾ ವರ್ಗದ ಜನರಿಗೂ ಮನ್ನಣೆ ಮತ್ತು ಮಾನ್ಯತೆಯನ್ನು ನೀಡಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರವನ್ನು ಕ್ಷೇತ್ರದ ಜನತೆಯ ಪರವಾಗಿ ಅಭೀನಂದಿಸುತ್ತೇನೆ ಎಂದು ಡಾ. ಮಂಥರ್‌ ಗೌಡ ಸಂತಸ ವ್ಯಕ್ತ ಪಡಿಸಿದ್ದಾರೆ.

Exit mobile version